ಎಂಎಸ್ ಲೈಫ್ ಸ್ಟೀಲ್ - ಒಂದು ಸಂಕ್ಷಿಪ್ತ ನೋಟ
ನಾವು, ಭಾರತ ದೇಶದಿಂದ ಇತರ ದೇಶಗಳಿಗೆ ಉಕ್ಕು ರಫ್ತು ಮಾಡುವವರಲ್ಲಿ ಒಬ್ಬರು. ಕಳೆದ 10 ವರ್ಷಗಳಿಂದಲೂ ನಾವು ವಿಜ್ಞಾನ ಮತ್ತು ಅತ್ಯಾಧುನಿಕ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿದ್ದೇವೆ.
ಎಂಎಸ್ ಲೈಫ್ - ಅಭಿವೃದ್ಧಿಯ ಅಂಚಿನಲ್ಲಿ
2005 ರಲ್ಲಿ ಒಂದೇ ಸ್ಥಾವರದಿಂದ ಪ್ರಾರಂಭಿಸಿ, ನಾವು ಈಗ ಗಣಿಗಳಿಂದ ಮಿಲ್ಸ್‌ಗೆ 3 ಘಟಕಗಳಾಗಿ ವಿಸ್ತರಿಸಿದ್ದೇವೆ ಮತ್ತು ಮೌಲ್ಯವರ್ಧಿತ ಮತ್ತು ಉನ್ನತ ದರ್ಜೆಯ ಉಕ್ಕಿನ ಉತ್ಪನ್ನಗಳ ಪ್ರಮುಖ ತಯಾರಕರಾಗಿ ಪರಿಗಣಿಸಲ್ಪಟ್ಟಿದ್ದೇವೆ. ನಮ್ಮ ಕಾರ್ಖಾನೆಗಳು ತೆಲಂಗಾಣ ಮತ್ತು ಆಂಧ್ರ ಪ್ರದೇಶದಲ್ಲಿದ್ದು , ನಾವು ದಕ್ಷಿಣ ರಾಜ್ಯಗಳಾದ ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು ಮತ್ತು ಕೇರಳದಲ್ಲಿ ಪ್ರಮುಖ ಪೂರೈಕೆದಾರರಾಗಿದ್ದೇವೆ. ಎಂಎಸ್ ಲೈಫ್ ವರ್ಷಕ್ಕೆ 1.5 ಮಿಲಿಯನ್ ಟನ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ (ಎಂಟಿಪಿಎ). ಈಗ, ನಾವು 2020 ರ ವೇಳೆಗೆ 2,50,000 ಎಂಟಿಪಿಎ ಅಂಕವನ್ನು ತಲುಪುವ ಹಾದಿಯಲ್ಲಿದ್ದೇವೆ.
ಉತ್ತಮ ನಾಳೆಗೆ ದಾರಿ ಮಾಡಿಕೊಡುತ್ತಿದೆ
ವೇಗದ ಗತಿಯ ಬದಲಾವಣೆಗಳಿಗೆ ಹೊಂದಿಕೊಳ್ಳುವ ಮೂಲಕ ನಾವು ಉತ್ತಮ ಗುಣಮಟ್ಟದ ಮಾನದಂಡಗಳನ್ನು ಕಾಯ್ದುಕೊಳ್ಳುತ್ತಿದ್ದೇವೆ. ಉಕ್ಕಿನ ತಯಾರಿಕೆಯಲ್ಲಿ ಕ್ರಾಂತಿಯುಂಟುಮಾಡುವ ಗುರಿ ಹೊಂದಿದ್ದೇವೆ. ಯಾವುದೇ ಸಂದರ್ಶಕರು ನಮ್ಮ ಎಂಜಿನಿಯರಿಂಗ್ ಮತ್ತು ಅತ್ಯಾಧುನಿಕ ಸೌಲಭ್ಯಗಳನ್ನು ಕಂಡು ಆಶ್ಚರ್ಯಚಕಿತರಾಗುತ್ತಾರೆ.
2005 ರಿಂದ ನಿರ್ಮಾಣ ಉದ್ಯಮದಲ್ಲಿ ಹೊಸ ಆವಿಷ್ಕಾರವನ್ನು ತಂದಿರುವುದು
2005 ರಲ್ಲಿ ಸ್ಥಾಪನೆಯಾದ ಈ ಕಂಪನಿಯು ಆಂಧ್ರಪ್ರದೇಶ ಮತ್ತು ತೆಲಂಗಾಣದಾದ್ಯಂತ ಮೂರು ಕಾರ್ಖಾನೆಗಳನ್ನು ಹೊಂದಿರುವ ಸಮಗ್ರ ಉಕ್ಕಿನ ಘಟಕವಾಗಿ ಬೆಳೆದಿದೆ. ಅತ್ಯಾಧುನಿಕ ಉತ್ಪಾದನಾ ಸೌಲಭ್ಯಗಳು 850 ಎಕರೆಗೂ ಹೆಚ್ಚು ವಿಸ್ತೀರ್ಣದಲ್ಲಿ 1,50,000 ಎಂಟಿಪಿಎ ಉತ್ಪಾದನಾ ಸಾಮರ್ಥ್ಯದೊಂದಿಗೆ 2020 ರ ವೇಳೆಗೆ 2,50,000 ಎಂಟಿಪಿಎಸ್ ತಲುಪುವ ನಿರೀಕ್ಷೆಯಿದೆ. ನಾವಿನ್ಯತೆಯೇ ಕೇಂದ್ರಬಿಂದುವಾಗಿ ಸ್ಥಿತಗೊಂಡಿರುವ ಈ ಸ್ಟೀಲ್ ಕಂಪನಿಯು ದಕ್ಷಿಣ ಭಾರತದಲ್ಲಿ 500, 550 ಮತ್ತು 600 ದರ್ಜೆಯ ಸ್ಟೀಲ್ ಬಾರ್‌ಗಳನ್ನು ತಯಾರಿಸಿದ ಮೊದಲ ಉಕ್ಕಿನ ಕಂಪನಿ.
ಪ್ರಸ್ತುತ ದಕ್ಷಿಣ ಭಾರತದಾದ್ಯಂತ ವೇಗವಾಗಿ ಬೆಳೆಯುತ್ತಿರುವ ಕಂಪನಿಗಳಲ್ಲಿ ಒಂದಾಗಿದೆ, 100+ ಎಕ್ಸ್‌ಕ್ಲೂಸಿವ್ ಚಾನೆಲ್ ಪಾಲುದಾರರು ಸೇರಿದಂತೆ 750 ಕ್ಕೂ ಹೆಚ್ಚು ಚಾನೆಲ್ ಪಾಲುದಾರರೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಕಂಪನಿಯು ಹಲವು ವರ್ಷಗಳಲ್ಲಿ ಉತ್ತಮ ಗುಣಮಟ್ಟ ಮತ್ತು ನಾವಿನ್ಯತೆಯನ್ನು ಸ್ಥಾಪಿಸಿದೆ, ಆದ್ದರಿಂದ ರಾಷ್ಟ್ರೀಯ ಪ್ರಮುಖ ಯೋಜನೆಗಳಾದ ಹೈದರಾಬಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಕೃಷ್ಣಪಟ್ಟಣಂ ಬಂದರು, ಇತ್ಯಾದಿ ಯೊಂದಿಗೆ ಸಂಬಂಧ ಹೊಂದಿದೆ.
ಭಾರತದ ಉಕ್ಕಿನ ಉದ್ಯಮದ ನಾಯಕನಾಗಿ, ದೇಶದಲ್ಲಿ ನಿರ್ಮಾಣದ ಗುಣಮಟ್ಟವನ್ನು ಸುಧಾರಿಸುವುದು ಮತ್ತು ನವೀಕರಿಸುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ನಾವು ನಂಬುತ್ತೇವೆ.